Wednesday, 26 October 2016

Swalthnde mahatvam

❇ _*ಸ್ವಲಾತಿನ ಮಹತ್ವ*_  ❇
        _ಚರಿತ್ರೆ ಭಾಗ - 1_
〰〰〰〰〰〰〰〰

_‌ಬಗ್ದಾದಿನಲ್ಲಿ ಇಬ್ಬರು ಭಕ್ತ ಶ್ರೀಮಂತ ವ್ಯಾಪಾರಿಗಳಿದ್ದರು.ಕಾಲ ಚಕ್ರ ಉರುಳುತ್ತಿದ್ದಂತೆ ಆ ವ್ಯಾಪಾರಿಗಳ ಪೈಕಿ ಓರ್ವರ ವ್ಯಾಪಾರ ದೈನಂದಿನ ಕುಸಿಯುತ್ತಾ ಬಂದು ಜೀವನ ನಿರ್ವಹಣೆಗೂ ಕೂಡಾ ಕಷ್ಟವಾಯಿತು. ತನ್ನ ಮತ್ತು ಪತ್ನಿ ಮಕ್ಕಳ ಜೀವನದ ಖರ್ಚಿಗಾಗಿ ಆ ವ್ಯಕ್ತಿ 500 ದಿರ್ಹಂ ಹಣ ಮತ್ತೊಬ್ಬ ವ್ಯಾಪಾರಿಯಿಂದ ನಿರ್ದಿಷ್ಟ ಅವಧಿಗೆ ಸಾಲ ತೆಗೆದುಕೊಂಡರು. ಅವಧಿ  ಮುಗಿದರೂ ಸಾಲ ತೀರಿಸಲಾಗಲೇ ಇಲ್ಲ. ಸಾಲ ಕೊಟ್ಟ ವ್ಯಾಪಾರಿ ಹಲವು ಸಾರಿ ತನ್ನ ಸಾಲ ಸಂದಾಯಿಸುವಂತೆ ವಿನಂತಿಸುತ್ತಲೇ ಇದ್ದರು."ಸದ್ಯ ಕೊಡುತ್ತೇನೆ " ಎಂಬ ಭರವಸೆ ಅಲ್ಲದೆ ಸಾಲ ಮರುಪಾವತಿ ಆಗಲೇ ಇಲ್ಲ.ಕೇಳಿ ಕೇಳಿ ಸುಸ್ತಾದ ಸಾಲ ಕೊಟ್ಟವ ಇಸ್ಲಾಮೀ ಕೋರ್ಟಿಗೆ ದೂರು ನೀಡಿದರು. ಸಾಲಗಾರ ಕೋರ್ಟ್'ಗೆ ಹಾಜರಾದರು._

_ಖಾಝಿ ಕೇಳಿದರು "ನೀವು ಈತನಿಂದ 500 ದಿರ್ಹಂ ಸಾಲ ತೆಗೆದುಕೊಂಡಿರುವುದು ನಿಜವೇ?"_
_ಸಾಲಗಾರ: ಹೌದು_

_ಖಾಝಿ: ಮತ್ತೇಕೆ ಸಾಲ ಮರುಪಾವತಿಸಲಿಲ್ಲ ?_
_ಸಾಲಗಾರ: ನನ್ನಿಂದ ಸಾಲ ತೀರಿಸಲು ಸದ್ಯ ಸಾಧ್ಯವೇ ಇಲ್ಲ. ಅಷ್ಟೊಂದು ದಾರಿದ್ರ್ಯನಾಗಿದ್ದೇನೆ ನಾನು_.

_ಖಾಝಿ: ಹಾಗಾದರೆ ಕಾರಾಗ್ರಹದಲ್ಲಿರಲು ಸಿದ್ಧರಾಗಿ_.
_ಸಾಲಗಾರ: ಜೈಲಿನಲ್ಲಿರಲು ಸಿದ್ಧನಾಗಿದ್ದೇನೆ.ಸೆರೆಮನೆಗೆ ಕೊಂಡು ಹೋಗುವ ಮುನ್ನ ನನ್ನ ಪತ್ನಿ ಮಕ್ಕಳನ್ನು ನೋಡಿ ಬರಲು ಇಪ್ಪತ್ತನಾಲ್ಕು ಗಂಟೆಗಳ ಅವಧಿ ನೀಡಿ ಸಹಕರಿಸಬೇಕು.ನಾಳೆ ಇಲ್ಲಿ ಹಾಜರಿರುತ್ತೇನೆ_.

_ಖಾಝಿ: ನಾಳೆ ನೀನು ಇಲ್ಲಿ ಹಾಜರಾಗುತ್ತೀಯ ಎಂಬುದಕ್ಕೆ ಏನು ಗ್ಯಾರಂಟಿ? ಇಲ್ಲಿಂದ ರಕ್ಷೆ ಹೊಂದಲು ನೀನು ಮಾಡಿರುವ ಸೂತ್ರವಾಗಿರಬಹುದು ಇದು. ಜಾಮೀನುದಾರ ನಿಲ್ಲದೆ ಇಲ್ಲಿಂದ ಹೋಗಲು ಸಾಧ್ಯವಿಲ್ಲ ಯಾರಿದ್ದಾರೆ ಜಾಮೀನುದಾರ ?_
_ಸಾಲಗಾರ: ಅಳುತ್ತಾ ನಮ್ಮ ಪ್ರವಾದಿ ರವರನ್ನು ಜಾಮೀನು ನೀಡುತ್ತೇನೆ.ಖಂಡಿತ ನಾಳೆ ನಾನು ಹಾಜರಾಗುತ್ತೇನೆ_.

_ಪ್ರವಾದಿವರ್ಯರ ಹೆಸರು ಕೇಳಿದ್ದೇ ತಡ ಖಾಝಿ ಕ್ಷಣ ಕಾಲ ನಡುಗಿದರು..._
🔹ಮುಂದುವರಿಯುವುದು🔹

✍� _*PM ಪಾಲ್ತಾಡು*_

No comments: