Wednesday, 26 October 2016

Maranam

ಬೆಲೆಬಾಳುವ ವಸ್ತ್ರ ಧರಿಸಿಕೊಂಡು ಗಗನಚುಂಬಿ ಕಟ್ಟಡಗಳಲ್ಲಿ ವಾಸಿಸುತ್ತಾ ಐಶಾರಾಮಿ ವಾಹನಗಳಲ್ಲಿ ಸಂಚರಿಸಿ ಆಡಂಬರದ ಜೀವನ ನಡೆಸುತ್ತಿರುವ ನಾವು ಕೊನೆಗೊಂದು ದಿನ ಯಾವುದೋ ಒಂದು ಮಸೀದಿಗೆ ಯಾರೋ ಒಬ್ಬರು ದಾನ ನೀಡಿದ
#ಮೈಯ್ಯತ್_ಕಟ್ಟಿಲ್
  ಎಂಬ ವಾಹನದಲ್ಲಿ ಯಾತ್ರಮಾಡದ್ದೇವೆ ಎಂಬುವುದನ್ನು ಮರೆಯಬಾರದು.....

ಮರಣಾನಂತರ ಒಂದು ಜೀವನ ಇದೆ ಮತ್ತು ವಾಸ್ತವದಲ್ಲಿ ಜೀವನ ಆರಂಭವಾಗುವುದೇ ಮರಣದ ಅನಂತರ ಎಂಬ ಪ್ರಜ್ಞೆ ಜನರಲ್ಲಿ ಇಲ್ಲದಿರುವುದೇ ಅವರು ಈ ರೀತಿ ವರ್ತಿಸುವುದಕ್ಕೆ ಕಾರಣ. ಒಂದು ವೇಳೆ ತಾವು ಸತ್ತು ಗೋರಿಯಲ್ಲಿ ದಫನವಾಗುವ ಮೂಲಕ, ನಿಜವಾಗಿ ದಫನವಾಗುವ ಬದಲು ಬೇರೊಂದು ಲೋಕವನ್ನು ಪ್ರವೇಶಿಸುತ್ತಿದ್ದೇವೆ ಎಂಬ ಪ್ರಜ್ಞೆ ಅವರಲ್ಲಿರುತ್ತಿದ್ದರೆ, ಅವರು ಖಂಡಿತವಾಗಿಯೂ ತಮ್ಮ ಮರಣದ ಆಲೋಚನೆ ಬಂದಾಗ  ತಮ್ಮ  ಮಕ್ಕಳ  ಭವಿಷ್ಯದ ಬಗ್ಗೆ ತಲೆ  ಕೆಡಿಸಿಕೊಳ್ಳುವ ಬದಲು, “ಮರಣಾನಂತರ ನನ್ನ ಗತಿಯೇನು?” ಎಂದು ಚಿಂತಿಸುತ್ತಿದ್ದರು.

ವಾಸ್ತವದಲ್ಲಿ ಆಧುನಿಕ ಯುಗದ ಹೆಚ್ಚಿನೆಲ್ಲಾ ಮನುಷ್ಯರು, ಅವರು ಧಾರ್ಮಿಕ ವ್ಯಕ್ತಿಗಳಾಗಿರಲಿ ಇತರರಿರಲಿ ತಮ್ಮ ಬದುಕು ಮರಣದೊಂದಿಗೇ ಕೊನೆಗೊಳ್ಳು ವುದಿಲ್ಲ, ಮರಣದ ಮೂಲಕ ತಾವು ಈ ಲೋಕದ ಬದುಕಿಗಿಂತ ಹೆಚ್ಚು ವಾಸ್ತವಿಕವಾದ ಮತ್ತು ಇದಕ್ಕಿಂತ ಹೆಚ್ಚು ಮಹತ್ವವುಳ್ಳ ಶಾಶ್ವತ ಬದುಕೊಂದನ್ನು ಪ್ರವೇಶಿಸುತ್ತಿದ್ದೇವೆ ಎಂಬ ವಿಶ್ವಾಸದಿಂದ ವಂಚಿತರಾಗಿದ್ದಾರೆ.

ಮರಣಾನಂತರ ಬರಲಿರುವ ಜೀವನದ ಬಗ್ಗೆ ಸಂದೇಹವುಂಟಾಗಲು ಮುಖ್ಯವಾಗಿ ಎರಡು ಕಾರಣಗಳಿವೆ. ಮೊದಲನೆಯದಾಗಿ, ಪ್ರತಿಯೊಬ್ಬ ಮನುಷ್ಯನು ಸತ್ತ ಬಳಿಕ ಅವನ ಶರೀರ ಮಣ್ಣಲ್ಲಿ ಸೇರಿಕೊಳ್ಳುತ್ತದೆ. ಮನುಷ್ಯನು ಸತ್ತು ಅವನ ಶರೀರ ಮಣ್ಣಾಗಿ ಹೋದ ಬಳಿಕ ಅವನು ಮತ್ತೆ ಹೇಗೆ ಜೀವಂತಗೊಳ್ಳುತ್ತಾನೆ ಎಂಬುದು ನಮಗೆ ಸುಲಭವಾಗಿ ಅರ್ಥವಾಗುವುದಿಲ್ಲ. ಎರಡನೆಯದಾಗಿ ಮರಣಾನಂತರ ಇರುವ ಜಗತ್ತು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಈ ಲೋಕ ಪ್ರತಿಯೊಬ್ಬನಿಗೂ ಕಾಣಿಸುತ್ತಿದೆ. ಆದರೆ ಇದರಾಚೆಗಿನ ಲೋಕ ಯಾರ ಕಣ್ಣಿಗೂ ಬೀಳುವುದಿಲ್ಲ. ಆದ್ದರಿಂದ ಈ ಜೀವನದ ಅನಂತರ ಇನ್ನೊಂದು ಜೀವನ ಇದೆ ಎಂದು ನಂಬಲು ನಮಗೆ ಸಾಧ್ಯವಾಗುವುದಿಲ್ಲ.

No comments: