Friday, 17 February 2017

SSF ಹಾಗು SYS ಮಂಡೆಕೋಲು ಗುರುವಮೊಟ್ಟೆ ಶಾಖಾ ವತಿಯಿಂದ ಅನುಸ್ಮರಣಾ ಕಾರ್ಯಕ್ರಮ

SYS ಹಾಗು SSF ಗುರುವಮೊಟ್ಟೆ ಮಂಡೇಕೋಲು ಶಾಖಾ ವತಿಯಿಂದ ಅನುಸ್ಮರಣಾ ಕಾರ್ಯಕ್ರಮವು ಫೆಬ್ರವರಿ 14 ರಂದು ಮರ್ಹೂಂ ಪೋಕರ್ ಕುಂಞಿ ವೇದಿಕೆ ಗುರುವಮೊಟ್ಟೆಯಲ್ಲಿ ನಡೆಯಿತು. SYS ಬ್ರಾಂಚ್ ಅಧ್ಯಕ್ಷರಾದ ಅಬ್ದುಲ್ಲ ಸಖಾಪಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಂ ಇಯತುಲ್ ಉಲಮಾ ಸುಳ್ಯ ತಾಲೂಕು ಅಧ್ಯಕ್ಷರಾದ ಸೈಯದ್  ಕುಂಞಿ ಕೊಯ ಸಅದಿ ತಂಙಲ್ ಉದ್ಘಾಟಿಸಿದರು.
SSF ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಪಾತೂರ್ ಅಬ್ದುಲ್ ಜಬ್ಬಾರ್ ಸಖಾಫಿ ಮುಖ್ಯಪ್ರಭಾಷಣ ಗೈದರು.
ಝೈನುಲ್ ಆಬಿದೀನ್ ಮುತ್ತುಕೋಯ ತಂಙಳ್ ಕಣ್ಣವಂ ಪ್ರಾರ್ಥನೆ ನಿರ್ವಹಿಸಿದರು.
ಹಾರಿಸ್ ಮಿಸ್ಬಾಹಿ ಪೈಂಬಚ್ಚಾಲ್ ಪ್ರಾಸ್ತಾವಿಕ ಭಾಷಣ ಗೈದರು.SYS ಮುಳ್ಳೇರಿಯ ಝೋನ್ ಕಾರ್ಯದರ್ಶಿ ಅಬ್ದುಲ್ ರಜಾಕ್ ಸಖಾಪಿ, ಗುರುವಮೊಟ್ಟೆ ಮಾಜಿ ಖತೀಬ್ ರಪೀಕ್ ಸಖಾಫಿ ಮಯ್ಯಲ ಶುಭ ಅರೈಸಿ ಮಾತನಾಡಿದರು. ಹುಸೈನ್ ತಂಙಲ್ ಆದೂರ್, ಜಿಎಸ್ ಅಬ್ದುಲ್ ಕಾದರ್ ಸಅದಿ ಎ.ಬಿ ಅಶ್ರಪ್ ಸಅದಿ, ಅಬ್ದುಲ್ ಲತೀಪ್ ಸಖಾಫಿ, ನಾಸರ್ ಬಾಹಸನಿ, ಅಬ್ದುಲ್ ಹಮೀದ್ ಸುಣ್ಣಮೂಲೆ, ಸಿದ್ದೀಕ್ ಕಟ್ಟೆಕಾರ್ಸ್ ಉಪಸ್ಥಿತರಿದ್ದರು.ಶಾಖಾ ಅಧ್ಯಕ್ಷರು ಲತೀಪ್ ಸಖಾಫಿ ಸ್ವಾಗತಿಸಿ ಅಶ್ರಪ್ ಜೌಹರಿ ವಂದಿಸಿದರು.
ಜಿ.ಕೆ ಇಬ್ರಾಹಿಂ ಅಂಜದಿ ಕಾರ್ಯಕ್ರಮವನ್ನು ನಿರೂಪಿಸಿದರು.

No comments: