ಸುನ್ನಿ ಸ್ಟುಡೆಂಟ್ ಪೆಡರೇಶನ್ SSF ಇರುವಂಬಳ್ಳ ಶಾಖೆ ಹಾಗು
ಸುನ್ನಿ ಯುವಜನ ಸಂಘ SYS ಇರುವಂಬಳ್ಳ ಬ್ರಾಂಚ್ ಇದರ ಜಂಟಿ ಆಶ್ರಯದಲ್ಲಿ ಹುಬ್ಬುರಸೂಲ್ ಪ್ರಭಾಷಣ ಹಾಗು ತಾಜುಲ್ ಉಲಾಮ ನೂರುಲ್ ಉಲಾಮ ಅನುಸ್ಮರಣಾ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಇರುವಂಬಳ್ಳ ತಾಜುಲ್ ಉಲಾಮ ನಗರ ಪೋಸೋಟ್ ತಂಙಲ್ ವೇದಿಕೆಯಲ್ಲಿ ನಡೆಯಿತು.ಮಗ್ರಿಬ್ ನಮಾಝಿನ ನಂತರ ತಾಜುಲ್ ಉಲಾಮ (ಖ.ಸಿ) ರವರ ಶಿಶ್ಯರಾದ ಐ.ಹೆಚ್ ಹಾಜಿ ಹಸೈನಾರ್ ಮದನಿ ಉಸ್ತಾದ್ ಹಾಗು ನೂರುಲ್ ಉಲಾಮರ ಶಿಶ್ಯರಾದ ಮೈತ್ತಡ್ಕ ಹನೀಪ್ ಸಅದಿ ಉಸ್ತಾದ್ ರವರ ನೇತೃತ್ವದಲ್ಲಿ ಮೌಲೀದ್ ಪಾರಯಣ ಕಾರ್ಯಕ್ರಮ ನಡೆಯಿತು. ಸುಲ್ತಾನುಲ್ ಉಲಾಮ, ರಈಸುಲ್ ಉಲಾಮ,ಕಂಝುಲ್ ಉಲಾಮರಂತಹ ನೇತಾರರ ನಿಸ್ವಾರ್ಥ ಉಪದೇಶವು ನಮ್ಮ ಹಾದಿಯಾಗಬೇಕು ಆದರಿಂದ ನಾವು ದಾರಿ ತಪ್ಪುವುದಿಲ್ಲ ಎಂದು ಕುಂಞಿಕೋಯ ಸಅದಿ ತಂಙಲ್ ಪ್ರಾಸ್ತಾವಿಕ ಭಾಷಣ ಗೈದು ಉದ್ಘಾಟನೆ ಗೈದರು. KCF ಸೌದಿ ಅರೇಬಿಯಾದ ನಾಯಕ ಹಾಗು ನಮ್ಮ ಸಂಘ ಸಂಸ್ಥೆಗಳಿಗೆ ಸಹಾಯವನ್ನು ನೀಡುವ ಅಬ್ದುಲ್ ರಜಾಕ್ ಹಾಜಿ ಅಡ್ಕ ಮತ್ತು SSF ಜಾಲ್ಸೂರ್ ಸೆಕ್ಟರ್ ಇದರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಯಾದ SSF ಇರುವಂಬಳ್ಳ ಶಾಖಾ ಕಾರ್ಯಕರ್ತ ಹುಸೈನ್ ಇರುವಂಬಳ್ಳ ಇವರನ್ನು ಸನ್ಮಾನಿಸಲಾಯಿತು.
ಮುಖ್ಯ ಪ್ರಭಾಷಣಕ್ಕಾಗಿ ಆಗಮಿಸಿದ ಕಬೀರ್ ಹಿಮಮಿ ಸಖಾಪಿ ಗೋಳಿಯಡ್ಕ ಸಂಘಟನೆಯ ಇತಿಹಾಸ ಹಾಗು ಸಂಘಟನೆಯಲ್ಲಿ ಕಾರ್ಯಚರಿಸಿದರೆ ಸಿಗುವ ಪ್ರತಿಫಲ ಕುರಿತು ಉದಾಹರಣೆ ಮೂಲಕ ತಿಳಿಸಿದರು. ತಾಜುಲ್ ಉಲಾಮ ನೂರುಲ್ ಉಲಾಮರವರ ಮಹತ್ವ ಹಾಗು ಎ.ಪಿ ಉಸ್ತಾದರ ಜೀವನ ಶೈಲಿಯನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದರು. ಕೊನೆಯಲ್ಲಿ ಎಲ್ಲರಿಗೂ ತಬರುಕ್ ವಿತರಿಸಲಾಯಿತು. ಜಿ.ಎಸ್ ಕಾದರ್ ಸಅದಿ ಸ್ವಾಗತಿಸಿ ಹುಸೈನ್ ಇರುವಂಬಳ್ಳ ವಂದಿಸಿದರು ಅಬ್ಬಾಸ್ ಎ.ಬಿ ಕಾರ್ಯಕ್ರಮ ನಿರೂಪಿಸಿದರು.
Sunday, 22 January 2017
SYS SSF ಇರುವಂಬಳ್ಳ ಹುಬ್ಬುರಸೂಲ್ ಪ್ರಭಾಷಣ ಹಾಗು ತಾಜುಲ್ ಉಲಾಮ ನೂರುಲ್ ಉಲಾಮ ಅನುಸ್ಮರಣೆ
Labels:
SSF IRUVAMBALLA NEWS
Subscribe to:
Post Comments (Atom)
No comments:
Post a Comment