ಸುನ್ನಿ ಸ್ಟುಡೆಂಟ್ ಪೆಡರೇಶನ್ SSF ಇರುವಂಬಳ್ಳ ಶಾಖೆ ಹಾಗು
ಸುನ್ನಿ ಯುವಜನ ಸಂಘ SYS ಇರುವಂಬಳ್ಳ ಬ್ರಾಂಚ್ ಇದರ ಜಂಟಿ ಆಶ್ರಯದಲ್ಲಿ ಹುಬ್ಬುರಸೂಲ್ ಪ್ರಭಾಷಣ ಹಾಗು ತಾಜುಲ್ ಉಲಾಮ ನೂರುಲ್ ಉಲಾಮ ಅನುಸ್ಮರಣಾ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಇರುವಂಬಳ್ಳ ತಾಜುಲ್ ಉಲಾಮ ನಗರ ಪೋಸೋಟ್ ತಂಙಲ್ ವೇದಿಕೆಯಲ್ಲಿ ನಡೆಯಿತು.ಮಗ್ರಿಬ್ ನಮಾಝಿನ ನಂತರ ತಾಜುಲ್ ಉಲಾಮ (ಖ.ಸಿ) ರವರ ಶಿಶ್ಯರಾದ ಐ.ಹೆಚ್ ಹಾಜಿ ಹಸೈನಾರ್ ಮದನಿ ಉಸ್ತಾದ್ ಹಾಗು ನೂರುಲ್ ಉಲಾಮರ ಶಿಶ್ಯರಾದ ಮೈತ್ತಡ್ಕ ಹನೀಪ್ ಸಅದಿ ಉಸ್ತಾದ್ ರವರ ನೇತೃತ್ವದಲ್ಲಿ ಮೌಲೀದ್ ಪಾರಯಣ ಕಾರ್ಯಕ್ರಮ ನಡೆಯಿತು. ಸುಲ್ತಾನುಲ್ ಉಲಾಮ, ರಈಸುಲ್ ಉಲಾಮ,ಕಂಝುಲ್ ಉಲಾಮರಂತಹ ನೇತಾರರ ನಿಸ್ವಾರ್ಥ ಉಪದೇಶವು ನಮ್ಮ ಹಾದಿಯಾಗಬೇಕು ಆದರಿಂದ ನಾವು ದಾರಿ ತಪ್ಪುವುದಿಲ್ಲ ಎಂದು ಕುಂಞಿಕೋಯ ಸಅದಿ ತಂಙಲ್ ಪ್ರಾಸ್ತಾವಿಕ ಭಾಷಣ ಗೈದು ಉದ್ಘಾಟನೆ ಗೈದರು. KCF ಸೌದಿ ಅರೇಬಿಯಾದ ನಾಯಕ ಹಾಗು ನಮ್ಮ ಸಂಘ ಸಂಸ್ಥೆಗಳಿಗೆ ಸಹಾಯವನ್ನು ನೀಡುವ ಅಬ್ದುಲ್ ರಜಾಕ್ ಹಾಜಿ ಅಡ್ಕ ಮತ್ತು SSF ಜಾಲ್ಸೂರ್ ಸೆಕ್ಟರ್ ಇದರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಯಾದ SSF ಇರುವಂಬಳ್ಳ ಶಾಖಾ ಕಾರ್ಯಕರ್ತ ಹುಸೈನ್ ಇರುವಂಬಳ್ಳ ಇವರನ್ನು ಸನ್ಮಾನಿಸಲಾಯಿತು.
ಮುಖ್ಯ ಪ್ರಭಾಷಣಕ್ಕಾಗಿ ಆಗಮಿಸಿದ ಕಬೀರ್ ಹಿಮಮಿ ಸಖಾಪಿ ಗೋಳಿಯಡ್ಕ ಸಂಘಟನೆಯ ಇತಿಹಾಸ ಹಾಗು ಸಂಘಟನೆಯಲ್ಲಿ ಕಾರ್ಯಚರಿಸಿದರೆ ಸಿಗುವ ಪ್ರತಿಫಲ ಕುರಿತು ಉದಾಹರಣೆ ಮೂಲಕ ತಿಳಿಸಿದರು. ತಾಜುಲ್ ಉಲಾಮ ನೂರುಲ್ ಉಲಾಮರವರ ಮಹತ್ವ ಹಾಗು ಎ.ಪಿ ಉಸ್ತಾದರ ಜೀವನ ಶೈಲಿಯನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದರು. ಕೊನೆಯಲ್ಲಿ ಎಲ್ಲರಿಗೂ ತಬರುಕ್ ವಿತರಿಸಲಾಯಿತು. ಜಿ.ಎಸ್ ಕಾದರ್ ಸಅದಿ ಸ್ವಾಗತಿಸಿ ಹುಸೈನ್ ಇರುವಂಬಳ್ಳ ವಂದಿಸಿದರು ಅಬ್ಬಾಸ್ ಎ.ಬಿ ಕಾರ್ಯಕ್ರಮ ನಿರೂಪಿಸಿದರು.
Sunday, 22 January 2017
SYS SSF ಇರುವಂಬಳ್ಳ ಹುಬ್ಬುರಸೂಲ್ ಪ್ರಭಾಷಣ ಹಾಗು ತಾಜುಲ್ ಉಲಾಮ ನೂರುಲ್ ಉಲಾಮ ಅನುಸ್ಮರಣೆ
Wednesday, 18 January 2017
ಮುಹಿಮ್ಮಾತ್ ಅಹ್ದಲಿಯಾ ದ್ಸಿಕ್ರ್ ಸ್ವಲಾತ್ ಮಜ್ಲಿಸ್ ನಾಳೆ
ಮುಹಿಮ್ಮಾತ್ ಅಹ್ದಲಿಯ ದ್ಸಿಕ್ರ್ ಸ್ವಲಾತ್ ಮಜ್ಲಿಸ್ ಹಾಗು ತಾಜುಲ್ ಉಲಾಮ ನೂರುಲ್ ಉಲಾಮ ಅನುಸ್ಮರಣೆ ನಾಳೆ ಮುಹಿಮ್ಮಾತ್ನಲ್ಲಿ ನಡಯಲಿದೆ.
5 ಘಂಟೆಗೆ ಸರಿಯಾಗಿ ಈ ಹಿಂದೆ ಮರಣ ಹೊಂದಿದ ಸಂಘ,ಸಂಸ್ಥೆಗಳ ನಾಯಕರುಗಳು ಹಾಗು ಕಾರ್ಯಕರ್ತರಿಗಾಗಿ ಖತಮುಲ್ ಕುರಾನ್ ಮಜ್ಲಿಸ್
ಮಗ್ರಿಬ್ ಬಳಿಕ ದ್ಸಿಕ್ರ್ ಹಾಗು ಸ್ವಲಾತ್ ಮಜ್ಲಿಸ್
ಇಶಾ ಬಳಿಕ ಹಂಝ ಮಿಸ್ಬಾಹಿ ಒಟಪದವು ಉಸ್ತಾದರ ಅರ್ಥ ಗಂಭೀರವಾದ ಪ್ರಭಾಷಣ
ಕೊನೆಯಲ್ಲಿ ಹಸನುಲ್ ಅಹ್ದಲ್ ತಂಙಲ್ ರವರ ನೇತೃತ್ವದಲ್ಲಿ ಕೂಟು ಪ್ರಾರ್ಥನೆ ನಡಯಲಿದೆ.
ಎಲ್ಲರೂ ಭಾಗವಹಿಸಿ ವಿಜಯ ಗೊಳಿಸಿರಿ
Tuesday, 17 January 2017
Lulu hypermarket ನಿಂದ ಉದ್ಯೋಗ ಆಹ್ವಾನ
http://www.luluhypermarket.com/AE/all/careers
ಈ ಲಿಂಕ್ಗೆ ಕ್ಲಿಕ್ ಮಾಡಿ ಅದರಲ್ಲಿ ತಮ್ಮ ಹೆಸರು ವಿಳಾಸ ನಮೂದಿಸಿ
Monday, 16 January 2017
ರಾಶಿದ್ ಬುಖಾರಿ ಮಾಪಳಡ್ಕಕ್ಕೆ
SSF ಕೇರಳ ರಾಜ್ಯ ಸಮಿತಿ ಕೋಶಾಧಿಕಾರಿ ರಾಶಿದ್ ಬುಖಾರಿ ಎಪ್ರಿಲ್ 17 ರಂದು ನಡೆಯುವ ಮಾಪಳಡ್ಕ ಮಖಾಂ ಉರೂಸ್ ನಲ್ಲಿ ಭಾಗವಹಿಸಲಿದ್ದಾರೆ.
ಏಪ್ರಿಲ್ 15 ರಿಂದ 17 ರ ವರೆಗೆ ಮಾಪಳಡ್ಕ ಮಖಾಂ ಉರೂಸ್ ನಡಯಲಿದೆ.
Saturday, 14 January 2017
ಜನವರಿ 22ಕ್ಕೆ ಕಬೀರ್ ಹಿಮಮಿ ಸಖಾಫಿ ಗೋಳಿಯಡ್ಕ ಇರುವಂಬಳ್ಳದಲ್ಲಿ
ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಫೆಡರೇಶನ್ SSF ಇರುವಂಬಳ್ಳ ಶಾಖೆ ಹಾಗು
ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ SYS ಇರುವಂಬಳ್ಳ ಬ್ರಾಂಚ್ ಇದರ ವತಿಯಿಂದ ಮದ್ಹುರಸೂಲ್ ಪ್ರಭಾಷಣ ಹಾಗು ತಾಜುಲ್ ಉಲಾಮ ನೂರುಲ್ ಉಲಾಮ ಅನುಸ್ಮರಣೆ ಕಾರ್ಯಕ್ರಮವು ದಿನಾಂಕ ಜನವರಿ 22 ಕ್ಕೆ ಇರುವಂಬಳ್ಳ ತಾಜುಲ್ ಉಲಮಾ ನಗರದಲ್ಲಿ ನಡೆಯಲಿದೆ.
ಬೀರಾನ್ ಹಾಜಿ ರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕುಂಞಿ ಕೋಯ ತಂಙಲ್ ಸಅದಿ ಸುಳ್ಯ ದುವಾ ಹಾಗು ಉದ್ಘಾಟನೆಗೈಯಲಿದ್ದಾರೆ.
ಸಂಜೆ 6 ಘಂಟೆಗೆ ಸರಿಯಾಗಿ ಮೌಲೀದ್ ಪಾರಾಯನ ಕಾರ್ಯಕ್ರಮ ನೆಡಯಲಿದೆ.
ಕಬೀರ್ ಹಿಮಮಿ ಸಖಾಫಿ ಮುಖ್ಯ ಪ್ರಭಾಷಣಗೈಯಲಿದ್ದಾರೆ.ಕೊನೆಯಲ್ಲಿ ಎಲ್ಲರಿಗು ತಬರ್ರುಕ್ ವಿತರಣೆ ನೆಡಯಲಿದೆ.
SSF ಇರುವಂಬಳ್ಳ ಶಾಖಾ ಮಹಾಸಭೆ
ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ ಫೆಡರೇಷನ್ (ರಿ) SSF ಇರುವಂಬಳ್ಳ ಶಾಖೆ ಇದರ ವಾರ್ಷಿಕ ಮಹಾಸಭೆಯು ದಿನಾಂ14:12:2016 ರಂದು ಇರುವಂಬಳ್ಳದಲ್ಲಿ ಜರಗಿತು.
ಶಾಖಾ ಅಧ್ಯಕ್ಷರು ಆಸಿಪ್ ಕೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಸೈನಾರ್ ಐ.ಹೆಚ್ ದುವಾ ನರವೇರಿಸಿದರು. ಸಭೆಯನ್ನು KCF ಸದಸ್ಯ ಅಬ್ದುರಜಾಕ್ ಅಡ್ಕ ಉದ್ಘಾಟನೆಗೈದರು ಪ್ರಧಾನ ಕಾರ್ಯದರ್ಶಿ ಹುಸೈನ್ ಇರುವಂಬಳ್ಳ ವರದಿ ವಾಚಿಸಿದರು.ಕೋಶಾಧಿಕಾರಿ ಅಬ್ಬಾಸ್ ಐ.ಎಂ ಲೆಕ್ಕ ಪತ್ರ ಮಂಡಿಸಿದರು. ಚುನಾವಣಾ ಅಧಿಕಾರಿಯಾಗಿ ಆಗಮಿಸಿದ ಅಬ್ಬಾಸ್ ಎ.ಬಿ ಅವರ ನೇತೃತ್ವದಲ್ಲಿ ಸದ್ರಿ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಕಾದರ್ ಬಿ.ಯಂ
ಉಪಾಧ್ಯಕ್ಷರು ಅಬ್ಬಾಸ್ ಐ.ಎಂ ಹಾಗು ಸವಾದ್ ಮೈತಡ್ಕ
ಪ್ರ.ಕಾರ್ಯದರ್ಶಿ ಮಹ್ ಶೂಕ್ ಕೆ ಹೆಚ್
ಜೊ.ಕಾರ್ಯದರ್ಶಿ ಯಾಹ್ಯ ಗೋರಡ್ಕ ಹಾಗು ಇರ್ಪಾನ್ ಮೈತಡ್ಕ
ಕೋಶಧಿಕಾರಿ ಖಲಂದರ್ ಶಾಫಿ
ಸದಸ್ಯರುಗಳಾಗಿ
ಹುಸೈನ್
ಆಸಿಪ್ ಕೆ
ಸಿರಾಜ್ ಕೆ.ಬಿ
ಸಂಶೀರ್
ಜವಾದ್
ಹಸೈನಾರ್
ಅಶ್ರಪ್ ಮತ್ತು
ಸಿದ್ದೀಕ್ ಮೈತಡ್ಕ
ಇವರನ್ನು ಆಯ್ಕೆ ಮಾಡಲಾಯಿತು.
ಸೆಕ್ಟರ್ ಕೌನ್ಸಿಲರುಗಳಾಗಿ ಕಾದರ್ ಬಿ.ಎಂ, ಮಹ್ ಶೂಕ್, ಖಲಂದರ್ ಶಾಪಿ, ಹುಸೈನ್, ಆಸಿಪ್,ಶಮೀರ್,ಅಬ್ಬಾಸ್ ಐಎಂ,ಅಬ್ಬಾಸ್ ಎ.ಬಿ, ಅಬುತಾಹಿರ್ ಮೈತಡ್ಕ, ಸವಾದ್ ಮೈತ್ತಡ್ಕ, ಸಿರಾಜು ಮೈತಡ್ಕ ಸಂಶೀರ್ ಮತ್ತು ಹಸೈನಾರ್ ಬಿಯಂ ಇವರನ್ನು ಆಯ್ಕೆ ಮಾಡಲಾಯಿತು.
SYS ಪ್ರ.ಕಾರ್ಯದರ್ಶಿ ಅಂದುಞಿ ಗೋರಡ್,ಕ SYS ಸುಳ್ಯ ಸೆಂಟರ್ ಸದಸ್ಯ ಕಯಬು ಕೆನಾಜೆ ಮತ್ತು ಅಬುತಾಹಿರ್ ಮೈತ್ತಡ್ಕ ಶುಭಾರೈಸಿದರು
ಬೀರಾನ್ ಹಾಜಿ ಕೇನಾಜೆ, ಅಬುಬಕ್ಕರ್ ಐ.ಎಂ,ಪೋಕರ್ ಪುಳಿಯಡಿ, ಇಬ್ರಾಹಿಮ್ ಮಾವಿನಪಳ್ಳ ಹಾಗು SSF ಮತ್ತು SYS ಶಾಖಾ ನಾಯಕರು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.
ಹುಸೈನ್ ಸ್ವಾಗತಿಸಿ ನೂತನ ಕಾರ್ಯದರ್ಶಿ ಮಹ್ ಶೂಕ್ ವಂದಿಸಿದರು.
SSF IRUVAMBALLA UNIT COUNSEL

Sunday, 1 January 2017
ಪೇರೋಡ್ ಉಸ್ತಾದರ ಸಂದೇಶ ಯಾತ್ರಾ
ಅರೆ....ಸುನ್ನಿ ಸಮೂಹ ರೋಮಾಂಚನಗೊಳ್ಳುವ.....
ನೂತನವಾದಿಗಳು ಬೆಚ್ಚಿಬೀಳುವ......
ವಿರೋಧಿಗಳು ಮ್ಯೆಪರಚಿಕೊಳ್ಳುವ.......
ಸುನ್ನತ್ ಜಮಾಅತ್ ಗಾಗಿ ತನ್ನ ಜೀವನ ವನ್ನೇ ಮುಡಿಪಾಗಿಟ್ಟ..........
ಎಂತಹ ಸಂದಿಗ್ದ ಪರಿಸ್ತಿತಿಯಲ್ಲೂ ಸುನ್ನಿ ಸಮೂಹಕ್ಕಾಗಿ ಘರ್ಜಿಸುವ..
ಎಂತಹ ಕಠಿಣ ವಿಷಯವನ್ನೂ ಜನಸಾಮಾನ್ಯರಿಗೆ ಮನದಟ್ಟಾಗುವಂತೆ ವಿವರಿಸಬಲ್ಲ ಸಾಮಥ್ಯವನ್ನು ಹೊಂದಿರುವ.........
ತನ್ನ ಮೂರಕ್ಷರದ ಮೂಲಕ
ವಿಶ್ವದ ಗಮನ ಸೆಳೆದ ಭಾರತವು ಕಂಡ ಅಪರೂಪದ ಖ್ಯಾತ ಅಂತರಾಷ್ಟ್ರೀಯ ವಾಗ್ಮಿ.......
ಹಲವು ಕಷ್ಟಕಾರ್ಪಣ್ಯಗಳಿಗೆ ರೋಗರುಜಿನಗಳಿಗೆ ಆಶಾಕಿರಣವಾಗಿ ಬೆಳೆದು ನಿಂತಿರುವ ಸಿರಾಜುಲ್ ಹುದಾ ಎಜುಕೇಶನ್ ಸೆಂಟರ್ ಕುಟ್ಯಾಡಿ ಇದರ ಸಾರಥಿ....
ಸುನ್ನಿ ಯುವಜನ ಸಂಘ ಇದರ ಕೇರಳಾಧ್ಯಕ್ಷ......ಅದೆ
ಮೌಲಾನ " ಪೇರೋಡ್ "
ಉಸ್ತಾದ್ ರವರು ಇದೇ ಬರುವ ಜನವರಿ 3 ರಂದು ಸಂಜೆ 7 ಘಂಟೆಗೆ ಸರಿಯಾಗಿ ಅನ್ಸಾರಿಯ ವಠಾರದಲ್ಲಿ ಸಿರಾಜುಲ್ ಹುದಾ ಕುಟ್ಯಾಡಿ ಇದರ ಸಿಲ್ವರ್ ಜುಬಿಲಿ ಪ್ರಯುಕ್ತ ಹಮ್ಮಿಕೊಂಡಿರುವ ' ಸಂದೇಶ ಯಾತ್ರೆ ' ಯ ದಕ್ಷಿಣ ಕನ್ನಡ ಜಿಲ್ಲಾ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಸುಳ್ಯದ ಇತಿಹಾಸಕ್ಕೊಂದು ಗರಿ ಮೂಡಿಸಲಿದ್ದಾರೆ......
ಆದ್ದರಿಂದ ಯಾವುದೇ ಕಾರ್ಯಕ್ರಮದ ಒತ್ತಡವಿದ್ದರೂ ಆ ಒಂದೆರಡು ಘಂಟೆಯ ಕಾರ್ಯಕ್ರಮಕ್ಕಾಗಿ ಮೀಸಲಿಡುವಂತೆಯೂ ,
ತಮ್ಮ ಭಾಗವಹಿಸುವಿಕೆಯ ಮೂಲಕ ಆ ಸುದಿನವನ್ನು ಅನುದಿನವೂ ಸ್ಮರಣೆಯಲ್ಲಿಡುವಂತಾಗಲು ನಿಮ್ಮೆಲ್ಲರ ಸಹಕಾರ ಅತ್ಯ ಗತ್ಯ ವಾಗಿರುವುದಾಗಿಯೂ ಈ ಮೂಲಕ ತಿಳಿಯಪಡಿಸುತ್ತಾ..........
" ನಮ್ಮೆಲ್ಲರ ಸಮಾಗಮನದಲ್ಲಿ ಅಡಗಿದೆ ಉಸ್ತಾದರ ಆಗಮನದ ಯಶಸ್ಸು " ಎಂಬ ಕಟು ಸತ್ಯ ನಮ್ಮ ಮನದಲ್ಲಿರಲಿ ಎಂದು ಜ್ಙಾಪಿಸುತ್ತಾ .....
ತಮ್ಮೆಲ್ಲರ ಸುಖಾಗಮನದ ನಿರೀಕ್ಷೆಯಲ್ಲಿ.........
ಎಸ್.ಎಸ್.ಎಫ್. ಇರುವಂಬಳ್ಳ ಶಾಖೆ .
ಇದರ ಪರವಾಗಿ
ಪಳ್ಳಿಕುಂಇ್ (ಫಝಲ್) ಇರುವಂಬಳ್ಳ.