Tuesday, 26 September 2017

ಹೈಸ್ಕೂಲ್ ಕ್ಯಾಂಪ್,ಸನ್ಮಾನ ಕಾರ್ಯಕ್ರಮ ಮತ್ತು ತಹ್ಲೀಲ್ ಸಮರ್ಪಣೆ




ಎಸ್.ಎಸ್.ಎಫ್ ಜಾಲ್ಸೂರು ಸೆಕ್ಟರ್ ವತಿಯಿಂದ ಹೈಸ್ಕೂಲ್ ಮಟ್ಟದ ವಿದ್ಯಾರ್ಥಿಗಳಿಗೆ *ಹೈಸ್ಕೂಲ್ ಕ್ಯಾಂಪ್* ಹಾಗೂ ಕೆ.ಸಿ.ಎಫ್ ಅಬುಧಾಬಿ ಝೋನ್ ಅಧ್ಯಕ್ಷರಾಗಿ ಆಯ್ಕೆಯಾದ *ಎ.ಬಿ ಹಸೈನಾರ್ ಅಮಾನಿ* ಯವರಿಗೆ ಸನ್ಮಾನ ಹಾಗೂ *ಸಯ್ಯಿದ್ ಉಮರುಲ್ ಫಾರೂಖ್ ಅಲ್ ಬುಖಾರಿ ಪೊಸೋಟ್ ತಂಙಳ್* ಅನುಸ್ಮರಣೆ ಹಾಗೂ ನಮ್ಮನ್ನಗಳಿದ ಸುನ್ನೀ ಕಾರ್ಯಕರ್ತರಿಗೆ ತಹ್ಲೀಲ್ ಸಮರ್ಪಣೆ ಕಾರ್ಯಕ್ರಮವು ಎಸ್.ಎಸ್.ಎಫ್ ಜಾಲ್ಸೂರು ಸೆಕ್ಟರ್ ಅಧ್ಯಕ್ಷರಾದ ನಾಸಿರುದ್ದೀನ್ ಬಾಹಸನಿ ಸುಣ್ಣಮೂಲೆಯವರ ಅಧ್ಯಕ್ಷತೆಯಲ್ಲಿ ಸಿರಾಜುಲ್ ಹುದಾ ಮದ್ರಸ ಮೇನಾಲದಲ್ಲಿ ನಡೆಯಿತು.ಮೇನಾಲ ಜುಮಾ ಮಸೀದಿ ಖತೀಬರಾದ ಇಸ್ಮಾಯಿಲ್ ಅಶ್ರಫಿ ದುವಾ ನೆರವೇರಿಸಿದರು.ಸೆಕ್ಟರ್ ಉಸ್ತುವಾರಿ ಹನೀಫ್ ಸಖಾಫಿ ಬೆಳ್ಳಾರೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಎಸ್.ಎಸ್.ಎಫ್ ಸುಳ್ಯ ಡಿವಿಷನ್ ಹೈಸ್ಕೂಲ್ ಕನ್ವೀನರ್ ಪ್ರಾಸ್ಥಾವಿಕ ಭಾಷಣ ಮಾಡಿದರು. ಎಸ್.ಎಸ್.ಎಫ್.ಬದಿಯಡ್ಕ ಡಿವಿಷನ್ ವಿಸ್ಡಮ್ ಕಾರ್ಯದರ್ಶಿ ಅಸ್ಲಂ ಅಡೂರು ವಿದ್ಯಾರ್ಥಿಗಳಿಗೆ ತರಗತಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸೆಕ್ಟರ್ ಕೋಶಾಧಿಕಾರಿ ಸಫ್ವಾನ್ ಎನ್ ಹಾಗೂ ಸೆಕ್ಟರ್ ವ್ಯಾಪ್ತಿಯ ಐದು ಶಾಖೆಗಳಿಂದ ಹಲವಾರು ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಎಸ್.ಎಸ್.ಎಫ್.ಜಾಲ್ಸೂರು ಸೆಕ್ಟರ್ ಪ್ರ.ಕಾರ್ಯದರ್ಶಿ ಹುಸೈನ್ ಇರುವಂಬಳ್ಳ ಸ್ವಾಗತಿಸಿ, ಉನೈಸ್ ಮೇನಾಲ ಧನ್ಯವಾದಗೈದರು.ಸೆಕ್ಟರ್ ಹೈಸ್ಕೂಲ್ ಕನ್ವೀನರ್ ಅನ್ವರ್ ಅಲಿ ಅಡ್ಕಾರ್ ಕಾರ್ಯಕ್ರಮ ನಿರೂಪಿಸಿದರು.

No comments: