*ಬಾವಿ ಬರೆದ ತೆರೆದ ಪತ್ರ*
ಮೂಲ:ಮಲಯಾಳಂ.
ಕನ್ನಡಕ್ಕೆ: ಹುಸೈನ್ ಇರುವಂಬಳ್ಳ.
ಅಜ್ಜನ ಕಾಲದಲ್ಲಿ ಬಾವಿ ಕೊರೆಯುವಾಗ ಆಳ 12 ಅಡಿ.
ಅಪ್ಪನ ಕಾಲದಲ್ಲಿ ಅದು 24 ಅಡಿ.
ಮತ್ತೆ ನನ್ನ ಕಾಲದಲ್ಲಿ ಬಾವಿಯನ್ನು ಅಗೆದು ಅಗೆದು 68 ತಲುಪಿದೆ ಆದರೆ ನೀರಿಲ್ಲ...!
ಇಂದು ಬೆಳಿಗ್ಗೆ ಬಾವಿಯನ್ನು ನೋಡಿದಾಗ ಅದರಲ್ಲಿ ಒಂದು ಬಿಳಿ ಕಾಗದವಿತ್ತು...!
ಅದೊಂದು ಪತ್ರ. ಬಾವಿಯು ಮನುಷ್ಯನಿಗೆ ಬರೆದ ತೆರದ ಪತ್ರವಾಗಿತ್ತದು...!
"ನಿನ್ನ ಅಜ್ಜನ ಕಾಲದಲ್ಲಿ ಇಲ್ಲಿರುವ ಒಂದು ಎಕರೆ ಜಾಗದಲ್ಲಿ ಸುಮಾರು 100 ತೆಂಗಿನ ಮರಗಳಿದ್ದವು.
ಒಂದೊಂದು ಮಳೆ ಬರುವಾಗ ಸರಿಸುಮಾರು 1 ಲಕ್ಷ ಲೀಟರ್ ನೀರು ತೆಂಗಿನ ಮರದ ಅಡಿಯಲ್ಲಿ ತಡೆದು ನಿಲ್ಲಿಸಿ ಭೂಮಿಯೊಳಗೆ ಸಂಗ್ರಹಿಸುತ್ತಿತ್ತು.
ನಿನ್ನ ಅಪ್ಪನ ಕಾಲದಲ್ಲಿ ತೆಂಗಿನ ಮರಗಳು ಮೂವತ್ತಕ್ಕೆ ಕುಗ್ಗಿತು.
ಕೊನೆಗೂ ನಿನ್ನ ಸರದಿ ಬಂದಾಗ ನಿನಗೆ ಟಾರೀಸು ಮನೆ ಬಾಕಿ ಸ್ಥಳದಲ್ಲಿ ಇಂಟರ್ ಲಾಕ್ ಮಾಡಿ ನೀರನ್ನು ಸಾಮೂಹಿಕವಾಗಿ ಹೊರಹಾಕಲಾಯಿತು.
'ಝೀರೋ ಬ್ಯಾಲೆನ್ಸ್ ಇರುವ ಬ್ಯಾಂಕ್ ಖಾತೆಯಲ್ಲಿ ಹಣ ಹಾಕದೆ ಚೆಕ್ಕ್ ಬರೆದು ಹಣಕ್ಕಾಗಿ ಬ್ಯಾಂಕಿನಲ್ಲಿ ಸಾಲು ನಿಂತು ಕಾಯುತ್ತಿರುವ ಮೂಕ, ಮೊದಲು ನೀನು ನಿನ್ನ ಬ್ಯಾಂಕ್ ಖಾತೆಗೆ ಹಣವನ್ನು ಹೂಡಿಕೆ ಮಾಡು.
ವಿಷಯಗಳು ಅರ್ಥ ಆಗಿದೆ ಎಂದು ಭಾವಿಸುತ್ತೇನೆ.
ಪ್ರೀತಿ ಪೂರ್ವಕ
ನಿಮ್ಮ ಬಾವಿ" ☹️
ಒಳ್ಳೆಯ ಸುದ್ದಿ, ನಾನು ನಿಮ್ಮ ಮೇಲೂ ಸುರಿಯುತ್ತಿದ್ದೇನೆ. ನೀವು ನಿಮ್ಮ ಸ್ನೇಹಿತರಿಗೂ ಸಹ ಸುರಿಯಿರಿ......
ಲೇಖಕರಿಗೆ ಒಂದು ಬಿಗ್ ಸೆಲ್ಯೂಟ್.
No comments:
Post a Comment