Monday, 22 June 2020

my first transaction

*ಬಾವಿ ಬರೆದ ತೆರೆದ ಪತ್ರ*

ಮೂಲ:ಮಲಯಾಳಂ.
ಕನ್ನಡಕ್ಕೆ: ಹುಸೈನ್ ಇರುವಂಬಳ್ಳ.

ಅಜ್ಜನ ಕಾಲದಲ್ಲಿ ಬಾವಿ ಕೊರೆಯುವಾಗ ಆಳ 12 ಅಡಿ.

ಅಪ್ಪನ ಕಾಲದಲ್ಲಿ ಅದು 24 ಅಡಿ.

ಮತ್ತೆ ನನ್ನ ಕಾಲದಲ್ಲಿ ಬಾವಿಯನ್ನು ಅಗೆದು ಅಗೆದು 68 ತಲುಪಿದೆ ಆದರೆ ನೀರಿಲ್ಲ...!

ಇಂದು ಬೆಳಿಗ್ಗೆ ಬಾವಿಯನ್ನು ನೋಡಿದಾಗ ಅದರಲ್ಲಿ ಒಂದು ಬಿಳಿ ಕಾಗದವಿತ್ತು...!

ಅದೊಂದು ಪತ್ರ. ಬಾವಿಯು ಮನುಷ್ಯನಿಗೆ ಬರೆದ ತೆರದ ಪತ್ರವಾಗಿತ್ತದು...!

"ನಿನ್ನ ಅಜ್ಜನ ಕಾಲದಲ್ಲಿ ಇಲ್ಲಿರುವ ಒಂದು ಎಕರೆ ಜಾಗದಲ್ಲಿ ಸುಮಾರು 100 ತೆಂಗಿನ ಮರಗಳಿದ್ದವು.
ಒಂದೊಂದು ಮಳೆ ಬರುವಾಗ ಸರಿಸುಮಾರು 1 ಲಕ್ಷ ಲೀಟರ್ ನೀರು ತೆಂಗಿನ ಮರದ ಅಡಿಯಲ್ಲಿ ತಡೆದು ನಿಲ್ಲಿಸಿ ಭೂಮಿಯೊಳಗೆ ಸಂಗ್ರಹಿಸುತ್ತಿತ್ತು.

ನಿನ್ನ ಅಪ್ಪನ ಕಾಲದಲ್ಲಿ ತೆಂಗಿನ ಮರಗಳು ಮೂವತ್ತಕ್ಕೆ  ಕುಗ್ಗಿತು.

ಕೊನೆಗೂ ನಿನ್ನ ಸರದಿ ಬಂದಾಗ ನಿನಗೆ ಟಾರೀಸು ಮನೆ ಬಾಕಿ ಸ್ಥಳದಲ್ಲಿ ಇಂಟರ್ ಲಾಕ್ ಮಾಡಿ ನೀರನ್ನು ಸಾಮೂಹಿಕವಾಗಿ ಹೊರಹಾಕಲಾಯಿತು.

'ಝೀರೋ ಬ್ಯಾಲೆನ್ಸ್ ಇರುವ ಬ್ಯಾಂಕ್ ಖಾತೆಯಲ್ಲಿ ಹಣ ಹಾಕದೆ ಚೆಕ್ಕ್ ಬರೆದು ಹಣಕ್ಕಾಗಿ ಬ್ಯಾಂಕಿನಲ್ಲಿ ಸಾಲು ನಿಂತು ಕಾಯುತ್ತಿರುವ ಮೂಕ, ಮೊದಲು ನೀನು ನಿನ್ನ  ಬ್ಯಾಂಕ್ ಖಾತೆಗೆ ಹಣವನ್ನು ಹೂಡಿಕೆ ಮಾಡು.

ವಿಷಯಗಳು ಅರ್ಥ ಆಗಿದೆ ಎಂದು ಭಾವಿಸುತ್ತೇನೆ.

ಪ್ರೀತಿ ಪೂರ್ವಕ 
ನಿಮ್ಮ ಬಾವಿ" ☹️

ಒಳ್ಳೆಯ ಸುದ್ದಿ, ನಾನು ನಿಮ್ಮ ಮೇಲೂ ಸುರಿಯುತ್ತಿದ್ದೇನೆ.  ನೀವು ನಿಮ್ಮ ಸ್ನೇಹಿತರಿಗೂ ಸಹ ಸುರಿಯಿರಿ......

  ಲೇಖಕರಿಗೆ ಒಂದು ಬಿಗ್ ಸೆಲ್ಯೂಟ್.

Saturday, 5 May 2018

Wednesday, 7 February 2018

SsF IRUVAMBALLA counsile 2018

*SSF ಇರುವಂಬಳ್ಳ ಶಾಖೆ ವಾರ್ಷಿಕ ಮಹಾಸಭೆ*

SSF ಇರುವಂಬಳ್ಳ ಶಾಖೆ ಇದರ ವಾರ್ಷಿಕ ಮಾಹಾ ಸಭೆಯು ಶಾಖಾ ಅಧ್ಯಕ್ಷರಾದ ಕಾದರ್ ಬಿ.ಎಂ ರವರ ಅಧ್ಯಕ್ಷತೆಯಲ್ಲಿ ಶಾಫಿ ಪುಳಿಯಡಿಯವರ ಮನೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಮಹಮ್ಮದ್ ಹಲ್ರಮಿ ಉದ್ಘಾಟಿಸಿದರು.ಅಬ್ದುಲ್ ಕಾದರ್ ಸಅದಿ ದುವಾ ನರವೇರಿಸಿ ಪ್ರಾಸ್ತಾವಿಕ ಮಾತನಾಡಿದರು.ಪ್ರಧಾನ ಕಾರ್ಯದರ್ಶಿ ಮಹ್ಶೂಕ್ ಕೆ.ಹೆಚ್ ವರದಿ ವಾಚಿಸಿದರು. ಜೊತೆ ಕಾರ್ಯದರ್ಶಿ ಯಾಹ್ಯ ಗೊರಡ್ಕ ಲೆಕ್ಕ ಪತ್ರ ಮಂಡಿಸಿದರು. ವರದಿ ಮತ್ತು ಲೆಕ್ಕ ಪತ್ರವನ್ನು ಸರ್ವಾನು ಮತದಿಂದ ಅಂಗೀಕರಿಸಲಾಯಿತು.ನಂತರ ಸೆಕ್ಟರ್ ನಿಂದ ವೀಕ್ಷಕರಾಗಿ ಆಗಮಿಸಿದ ಸಪ್ವಾನ್ ಸುಣ್ಣಮೂಲೆ ಮತ್ತು ಅಬ್ಬಾಸ್ ಎ.ಬಿ ಯವರ ನೇತೃತ್ವದಲ್ಲಿ ಸದ್ರಿ ಸಮೀತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ರಚಿಸಲಾಯಿತು. ಅದ್ಯಕ್ಷರಾಗಿ ಅಶ್ರಪ್ ಅಮಾನಿ, ಪ್ರದಾನ ಕಾರ್ಯದರ್ಶಿಯಾಗಿ ಮಹ್ಶೂಕ್, ಕೋಶಾಧಿಕಾರಿಯಾಗಿ ಶಾಫಿ ಪುಳಿಯಡಿ, ಉಪಾದ್ಯಕ್ಷರಾಗಿ ಮಹಮ್ಮದ್ ಹಳ್ರಮಿ ಮತ್ತು ಹಸೈನಾರ್ ಬಿ.ಎಂ ಕಾರ್ಯದರ್ಶಿಯಾಗಿ ಸಿಯಾಬುದ್ದೀನ್ ಗೊರಡ್ಕ ಮತ್ತು ಇರ್ಷಾದ್ ಕೆ.ಐ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಹುಸೈನ್, ಯಾಹ್ಯ, ಆಸಿಪ್, ಅಬೂತಾಹಿರ್, ಸವಾದ್, ಕಾದರ್,ಅಬ್ಬಾಸ್,ಮುತ್ತಲಿಬ್,ಖಲಂದರ್ ಶಾಫಿ ಇವರನ್ನು ಆಯ್ಕೆ ಮಾಡಲಾಯಿತು. ಸೆಕ್ಟರ್ ಕೌನ್ಸಿಲರ್ ಗಳಾಗಿ ಅಬ್ಬಾಸ್ ಎ.ಬಿ, ಹುಸೈನ್ ಐ.ಎಚ್, ಅಬ್ಬಾಸ್ ಐ.ಎಂ, ಸವಾದ್, ಅಸಿಪ್, ಅಬೂತಾಹಿರ್, ಕಾದರ್ ಬಿ.ಎಂ ಇವರನ್ನು ಆಯ್ಕೆ ಮಾಡಲಾಯಿತು.
ಎಸ್.ವೈ.ಎಸ್ ಸುಳ್ಯ ಸೆಂಟರ್ ಪ್ರದಾನ ಕಾರ್ಯದರ್ಶಿ ಅಂದುಂಞಿ  ಗೋರಡ್ಕ, ಎಸ್.ವೈ.ಎಸ್ ಇರುವಂಬಳ್ಳ ಬ್ರಾಂಚ್ ಅಧ್ಯಕ್ಷರು ಬೀರಾನ್ ಹಾಜಿ ಕೇನಾಜೆ, ಎಸ್.ವೈ.ಎಸ್ ಇರುವಂಬಳ್ಳ ಬ್ರಾಂಚ್ ಸದಸ್ಯರುಗಳಾದ ಸಿ.ಹೆಚ್ ಮಹಮ್ಮದ್ ಕುಂಞಿ,ಪೊಕರ್ ಪುಳಿಯಡಿ, ಅಡಲ್ ಹಮೀದ್, ಪೊಕರ್ ಕೇನಾಜೆ ಉಪಸ್ಥಿತರಿದ್ದರು. ಮಹ್ಶೂಕ್ ಕೆ.ಹೆಚ್ ಸ್ವಾಗತಿಸಿ ಸಿಯಾಬುದ್ದಿನ್ ಗೊರಡ್ಕ ವಂದಿಸಿದರು.

Wednesday, 8 November 2017