*SSF ಇರುವಂಬಳ್ಳ ಶಾಖೆ ವಾರ್ಷಿಕ ಮಹಾಸಭೆ*
SSF ಇರುವಂಬಳ್ಳ ಶಾಖೆ ಇದರ ವಾರ್ಷಿಕ ಮಾಹಾ ಸಭೆಯು ಶಾಖಾ ಅಧ್ಯಕ್ಷರಾದ ಕಾದರ್ ಬಿ.ಎಂ ರವರ ಅಧ್ಯಕ್ಷತೆಯಲ್ಲಿ ಶಾಫಿ ಪುಳಿಯಡಿಯವರ ಮನೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಮಹಮ್ಮದ್ ಹಲ್ರಮಿ ಉದ್ಘಾಟಿಸಿದರು.ಅಬ್ದುಲ್ ಕಾದರ್ ಸಅದಿ ದುವಾ ನರವೇರಿಸಿ ಪ್ರಾಸ್ತಾವಿಕ ಮಾತನಾಡಿದರು.ಪ್ರಧಾನ ಕಾರ್ಯದರ್ಶಿ ಮಹ್ಶೂಕ್ ಕೆ.ಹೆಚ್ ವರದಿ ವಾಚಿಸಿದರು. ಜೊತೆ ಕಾರ್ಯದರ್ಶಿ ಯಾಹ್ಯ ಗೊರಡ್ಕ ಲೆಕ್ಕ ಪತ್ರ ಮಂಡಿಸಿದರು. ವರದಿ ಮತ್ತು ಲೆಕ್ಕ ಪತ್ರವನ್ನು ಸರ್ವಾನು ಮತದಿಂದ ಅಂಗೀಕರಿಸಲಾಯಿತು.ನಂತರ ಸೆಕ್ಟರ್ ನಿಂದ ವೀಕ್ಷಕರಾಗಿ ಆಗಮಿಸಿದ ಸಪ್ವಾನ್ ಸುಣ್ಣಮೂಲೆ ಮತ್ತು ಅಬ್ಬಾಸ್ ಎ.ಬಿ ಯವರ ನೇತೃತ್ವದಲ್ಲಿ ಸದ್ರಿ ಸಮೀತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ರಚಿಸಲಾಯಿತು. ಅದ್ಯಕ್ಷರಾಗಿ ಅಶ್ರಪ್ ಅಮಾನಿ, ಪ್ರದಾನ ಕಾರ್ಯದರ್ಶಿಯಾಗಿ ಮಹ್ಶೂಕ್, ಕೋಶಾಧಿಕಾರಿಯಾಗಿ ಶಾಫಿ ಪುಳಿಯಡಿ, ಉಪಾದ್ಯಕ್ಷರಾಗಿ ಮಹಮ್ಮದ್ ಹಳ್ರಮಿ ಮತ್ತು ಹಸೈನಾರ್ ಬಿ.ಎಂ ಕಾರ್ಯದರ್ಶಿಯಾಗಿ ಸಿಯಾಬುದ್ದೀನ್ ಗೊರಡ್ಕ ಮತ್ತು ಇರ್ಷಾದ್ ಕೆ.ಐ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಹುಸೈನ್, ಯಾಹ್ಯ, ಆಸಿಪ್, ಅಬೂತಾಹಿರ್, ಸವಾದ್, ಕಾದರ್,ಅಬ್ಬಾಸ್,ಮುತ್ತಲಿಬ್,ಖಲಂದರ್ ಶಾಫಿ ಇವರನ್ನು ಆಯ್ಕೆ ಮಾಡಲಾಯಿತು. ಸೆಕ್ಟರ್ ಕೌನ್ಸಿಲರ್ ಗಳಾಗಿ ಅಬ್ಬಾಸ್ ಎ.ಬಿ, ಹುಸೈನ್ ಐ.ಎಚ್, ಅಬ್ಬಾಸ್ ಐ.ಎಂ, ಸವಾದ್, ಅಸಿಪ್, ಅಬೂತಾಹಿರ್, ಕಾದರ್ ಬಿ.ಎಂ ಇವರನ್ನು ಆಯ್ಕೆ ಮಾಡಲಾಯಿತು.
ಎಸ್.ವೈ.ಎಸ್ ಸುಳ್ಯ ಸೆಂಟರ್ ಪ್ರದಾನ ಕಾರ್ಯದರ್ಶಿ ಅಂದುಂಞಿ ಗೋರಡ್ಕ, ಎಸ್.ವೈ.ಎಸ್ ಇರುವಂಬಳ್ಳ ಬ್ರಾಂಚ್ ಅಧ್ಯಕ್ಷರು ಬೀರಾನ್ ಹಾಜಿ ಕೇನಾಜೆ, ಎಸ್.ವೈ.ಎಸ್ ಇರುವಂಬಳ್ಳ ಬ್ರಾಂಚ್ ಸದಸ್ಯರುಗಳಾದ ಸಿ.ಹೆಚ್ ಮಹಮ್ಮದ್ ಕುಂಞಿ,ಪೊಕರ್ ಪುಳಿಯಡಿ, ಅಡಲ್ ಹಮೀದ್, ಪೊಕರ್ ಕೇನಾಜೆ ಉಪಸ್ಥಿತರಿದ್ದರು. ಮಹ್ಶೂಕ್ ಕೆ.ಹೆಚ್ ಸ್ವಾಗತಿಸಿ ಸಿಯಾಬುದ್ದಿನ್ ಗೊರಡ್ಕ ವಂದಿಸಿದರು.