Tuesday, 16 May 2017

ಎಸ್ಸೆಸ್ಸಪ್ ಇರುವಂಬಳ್ಳ ಮಹ್ಳರತುಲ್ ಬದ್ರಿಯಾ ಮಜ್ಲಿಸ್


ಎಸ್ಸೆಸ್ಸಪ್  ಇರುವಂಬಳ್ಳ ಶಾಖಾ ವತಿಯಿಂದ ಮಾಸಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ದಿನಾಂಕ ಮೇ 16 ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿ ಮೂಸ ಕುಂಞಿ ರವರ ಸ್ವಗೃಹದಲ್ಲಿ ನಡೆಯಿತು. ಹನೀಪ್ ಸಅದಿ ಮೈತ್ತಡ್ಕ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿ ಕೊನೆಯಲ್ಲಿ ಮಹ್ಳರತುಲ್ ಬದ್ರಿಯಾ ಮಜ್ಲಿಸಿಗೆ ಇರುವ ಮಹತ್ವವನ್ನು ಸವಿಸ್ತಾರವಾಗಿ ವಿವರಿಸಿದರು.ಎಸ್ಸೆಸ್ಸಪ್ ಇರುವಂಬಳ್ಳ ಶಾಖಾ ನಾಯಕರು ಹಾಗು ಕಾರ್ಯಕರ್ತರು ಎಸ್.ವೈ.ಎಸ್ ಇರುವಂಬಳ್ಳ ಶಾಖಾ ನಾಯಕರು ಹಾಗು ಕಾರ್ಯಕರ್ತರು, ಊರಿನ ಮಹನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Friday, 5 May 2017

SSF ಜಾಲ್ಸೂರ್ ಸೆಕ್ಟರ್; "ಸ್ಲೇಟ್" ವಿದ್ಯಾರ್ಥಿ ಸಮ್ಮೇಳನ


ಎಸ್.ಎಸ್.ಎಫ್ ಜಾಲ್ಸೂರ್ ಸೆಕ್ಟರ್ ವತಿಯಿಂದ ಎಸ್.ಬಿ.ಎಸ್ ವಿದ್ಯಾರ್ಥಿಗಳ ಸೆಕ್ಟರ್ ಮಟ್ಟದ ಸ್ಲೇಟ್ ಶಿಬಿರವು ಸುಣ್ಣಮೂಲೆ ಮದ್ರಸಾ ವಠಾರದಲ್ಲಿ ಗುರುವಾರ ಮಧ್ಯಾಹ್ನ 2.30 ಕ್ಕೆ ಸರಿಯಾಗಿ ನಡೆಯಿತು.ಸೆಕ್ಟರ್ ಅಧ್ಯಕ್ಷರಾದ ನಾಸಿರ್ ಬಾಹಸನಿ ಸುಣ್ಣಮೂಲೆ ಅಧ್ಯಕ್ಷತೆಯಲ್ಲಿ ಸ್ಥಳೀಯ ಖತೀಬರಾದ ಕರೀಂ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಸಲಾಂ ಝುಹ್ರಿ ದುವಾ ನಿರ್ವಹಿಸಿದರು.
ಡಿವಿಷನ್ ಎಸ್.ಬಿ.ಎಸ್ ಕನ್ವೀನರ್ ಹನೀಪ್ ಸಖಾಫಿ ಬೆಳ್ಳಾರೆ ಕ್ಯಾಂಪ್ ನಡೆಸುವ ಉದ್ದೇಶ ವನ್ನು ವಿವರಿಸಿದರು.
ತರಗತಿ ವಿಭಾಗ ಒಂದು "ನಾನೊಂದು ಕಥೆ ಹೇಳುತ್ತೇನೆ" ಎಂಬ ವಿಷಯದಲ್ಲಿ ಲತೀಪ್ ಸಖಾಫಿ ಮಾಡನ್ನೂರ್ ತರಬೇತಿಯನ್ನು ನೀಡಿದರು.
ತರಗತಿ ವಿಭಾಗ ಎರಡು "ದ ಹೀರೋ" ಎಂಬ ವಿಷಯದಲ್ಲಿ ಎಸ್.ಎಸ್.ಎಪ್ ಬದಿಯಡ್ಕ ಡಿವಿಷನ್ ಕಾರ್ಯದರ್ಶಿ ಕರೀಂ ಜೌಹರಿ ವಿದ್ಯಾರ್ಥಿಗಳಿಗೆ ಉತ್ತಮರೀತಿಯಲ್ಲಿ ತರಬೇತಿಯನ್ನು ನೀಡಿದರು.
ಜಾಲ್ಸೂರ್ ಸೆಕ್ಟರ್ ವ್ಯಾಪ್ತಿಯ 6 ಶಾಖೆಗಳಿಂದ ಸುಮಾರು 50ಕ್ಕೂ ಮಿಕ್ಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹಮೀದ್ ಸುಣ್ಣಮೂಲೆ, ಅಲೀಚ್ಚ ಮಂಡೆಕೋಲು, ಲತೀಪ್ ಸಖಾಫಿ ಗೂನಡ್ಕ, ಪಿ.ಎ ಮಹಮ್ಮದ್, ಅಬ್ದುಲ್ ರಹ್ಮಾನ್ ಸಅದಿ, ಸಿದ್ದೀಕ್ ಕಟ್ಟೆಕಾರ್ಸ್, ಮಜೀದ್ ಸುಣ್ಣಮೂಲೆ, ಕಲೀಲ್ ಝುಹ್ರಿ, ಇಬ್ರಾಹಿಂ ಅಂಜದಿ, ಜಬ್ಬಾರ್ ಸಖಾಫಿ, ಕಬೀರ್ ಜಟ್ಟಿಪಳ್ಳ, ಪೈಝಲ್ ಝುಹ್ರಿ ಉಪಸ್ಥಿತರಿದ್ದರು.
ಎಸ್.ಬಿ.ಎಸ್ ಸೆಕ್ಟರ್ ಕನ್ವೀನರ್ ನೌಪಲ್ ಸಅದಿ ಸ್ವಾಗತಿಸಿ ಸೆಕ್ಟರ್ ಪ್ರ.ಕಾರ್ಯದರ್ಶಿ ಹುಸೈನ್ ಇರುವಂಬಳ್ಳ ವಂದಿಸಿದರು.ಅಬ್ಬಾಸ್ ಎ.ಬಿ ಕಾರ್ಯಕ್ರಮ ನಿರೂಪಿಸಿದರು.